ಅಭಿಪ್ರಾಯ / ಸಲಹೆಗಳು

ಇತಿಹಾಸ

 ಪೀಠಿಕೆ:

 

  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರ 1975ನೇ ಸಾಲಿನಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುತ್ತದೆ. ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡುವ ದೃಷ್ಟಿಯಿಂದ 2006-07ನೇ ಸಾಲಿನಲ್ಲಿ ಪ್ರತ್ಯೇಕವಾಗಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿರುತ್ತದೆ.  ನಿಗಮವು ಜುಲೈ 2006 ರಲ್ಲಿ ಕಂಪೆನಿಗಳ ಕಾಯಿದೆ 1956 ರಡಿ ಒಂದು ಕಂಪೆನಿಯಾಗಿ ನೊಂದಾಯಿತಗೊಡು, ದಿನಾಂಕ:22.02.2007ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. 

 

  2015-16ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಮೂಲಕ ಅಲೆಮಾರಿ/ ಅರೆ ಅಲೆಮಾರಿ, ಮತ್ತು ಅತಿ  ಸೂಕ್ಷ್ಮ ಸಮುದಾಯದ ಅಭಿವೃದ್ದಿಗಾಗಿ ಆದಿವಾಸಿ ಕೋಶವನ್ನು ರಚನೆ ಮಾಡಿತು. ತದನಂತರ ಸರ್ಕಾರದ ಆದೇಶದಂತೆ ಪರಿಶಿಷ್ಟ ಪಂಗಡದ ಈ ಸಮುದಾಯಗಳ ಅಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುವ ಜವಬ್ದಾರಿಯನ್ನು ನಿಗಮಕ್ಕೆ ವರ್ಗಯಿಸಿರುತ್ತದೆ.

 

  ರಾಜ್ಯ ಸರ್ಕಾರವು ದಿನಾಂಕ:19.09.2016ರ ಆದೇಶದಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಡಿಯಲ್ಲಿ ಕರ್ನಾಟಕ ಆದಿವಾಸಿ ಅಭಿವೃದ್ಧ್ದಿ ಮಂಡಳಿಯನ್ನು ಸ್ಥಾಪಿಸಿದ್ದು, ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಮತ್ತು  ಅರಣ್ಯ ಉತ್ಪನ್ನಗಳ ಆಧಾರಿತವಾಗಿ ಜೀವನ ನಿರ್ವಹಣೆ ಮಾಡುತ್ತಿರುವ ಪರಿಶಿಷ್ಟ ಪಂಗಡದ ಆದಿವಾಸಿ ಸಮುದಾಯಗಳಾದ ಕೊರಗರು, ಮಲೆಕುಡಿಯ, ಸೋಲಿಗ, ಇರುಳಿಗ ಮುಂತಾದ  ಉಪ ಜಾತಿಗಳ ಅಭಿವೃದ್ಧಿಗಾಗಿ ನಿಗಮದ ಮೂಲಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

 

  2022-23ರಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ದಿ ನಿಗಮವನ್ನು ಸ್ಥಾಪಿಸಿಲಾಗಿದೆ. ಆದ್ದರಿಂದ , ʼಕರ್ನಾಟಕ ಆದಿವಾಸಿ ಅಭಿವೃದ್ದಿ ಮಂಡಳಿʼಯನ್ನು ಅಲೆಮಾರಿ ನಿಗಮದಲ್ಲಿ ಸೇರಿಸಿ, ಸದರಿ ನಿಗಮದಲ್ಲಿ ವಿಲೀನಗೊಳಿಸಿ ಅಲೆಮಾರಿ ಇತ್ಯಾದಿ ಜಾತಿ ಪಟ್ಟಿಯಲ್ಲಿ ಇಲ್ಲದೇ ಇರುವ  ಕಡಿಮೆ ಜನಸಂಖ್ಯೆ ಒಟ್ಟು- 122681 ಇರುವ 25 ಸಮುದಾಯಗಳನ್ನು ಅಲೆಮಾರಿ ನಿಗಮದಲ್ಲಿ ಸೇರಿಸಿ, ಸದರಿ ನಿಗಮದಿಂದಲೇ ಆರ್ಥಿಕಾಭಿವೃದ್ದಿ ಕಾರ್ಯಕ್ರಮಗಳನ್ನು ಅನುಷ್ಠನಗೊಳಿಸುವ ಬಗ್ಗೆ ಮಾನ್ಯ ಸಮಾಜ ಕಲ್ಯಾಣ ಸಚಿವರ ಅನುಮೋದನೆ ಮೇರೆಗೆ ಸರ್ಕಾರದ ಆದೇಶ ಹೊರಡಿಸಲಾಗಿದೆ.

 

  2011ರ ಜನಗಣತಿಯಂತೆ ಕರ್ನಾಟಕ ಮಹರ್ಷಿ  ವಾಲ್ಮೀಕಿ  ಪರಿಶಿಷ್ಟ ಪಂಗಡಗಳ  ಅಭಿವೃದ್ದಿ ನಿಗಮದಲ್ಲಿ ಮುಂದುವರಿಸಲಾದ  ಉಪ ಜಾತಿಗಳು

 

ಕ್ರಸಂ

ಉಪ ಜಾತಿಗಳ ವಿವರ

2011ರ ಜನಸಂಖ್ಯೆ

1

ನಾಯಕ, ನಾಯ್ಡಕ, ಚೋಳಿವಾಳ ನಾಯಕ, ಕಪಾಡಿಯ ನಾಯಕ, ಮೋಟ ನಾಯಕ, ನಾನ ನಾಯಕ, ನಾಯಕ್‌,  ಬೇಡ, ಬೇಡರ್‌, ಮತ್ತು ವಾಲ್ಮೀಕಿ( ತಳವಾರ ಮತ್ತು ಪರಿವಾರ ಒಳಗೊಂಡಂತೆ)

3296354

2

ಗೊಂಡ, ನಾಯ್ಕಪೋಡ್

158243(ಅಲೆಮಾರಿ ನಿಗಮದ ರಾಜಗೊಂಡ ಒಳಗೊಂಡಂತೆ)

3

ಕೋಳಿ ಡೋರ್‌, ಟೋಕ್ರಿಕೋಳಿ, ಕೋಲ್ಚ, ಕೋಲ್ಗ

112190

4

ಮರಾಠಿ(ದ.ಕ & ಉಡುಪಿ ಜಿಲ್ಲೆ)

82449

ಒಟ್ಟು

3649236

 

ಇತ್ತೀಚಿನ ನವೀಕರಣ​ : 22-09-2023 05:01 PM ಅನುಮೋದಕರು: Admin1


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080