ಅಭಿಪ್ರಾಯ / ಸಲಹೆಗಳು

ಸ್ವಯಂ ಉದ್ಯೋಗ ಕಾರ್ಯಕ್ರಮಗಳು

ಸ್ವಯಂ ಉದ್ಯೋಗ ಕಾರ್ಯಕ್ರಮಗಳು:-

ಅ)  ಸ್ವಯಂ ಉದ್ಯೋಗ ನೇರಸಾಲ ಯೋಜನೆ(1.00 ಲಕ್ಷಗಳ ಸಹಾಯಧನ):

     

    

   

  ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕ/ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು ಸದರಿ ಯೋಜನೆಯ 50% ರಷ್ಟು ಗುರಿಯಲ್ಲಿ ಹೈನುಗಾರಿಕೆ  ಮತ್ತು ಉಳಿದ 50%ರಷ್ಟು ಗುರಿಯಲ್ಲಿ ತರಕಾರಿ, ಹಣ್ಣುಹಂಪಲು, ಮೀನು-ಮಾಂಸ ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಮುಂತಾದ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಮಳಿಗೆ /ತಳ್ಳುಗಾಡಿ ದುಡಿಮೆ ಬಂಡವಾಳ ಸೇರಿದಂತೆ ಇತ್ಯಾದಿ ಉದ್ದೇಶದ ಸೌಲಭ್ಯಗಳಿಗಾಗಿ ಘಟಕ ವೆಚ್ಚ ರೂ.1.೦೦,೦೦೦/-ದಲ್ಲಿ ಶೇ.5೦ರಷ್ಟು ಸಾಲ ಮತ್ತು ಶೇ.5೦ರಷ್ಟು ಸಹಾಯಧನದ ಮೂಲಕ ಅನುಷ್ಟಾನಗೊಳಿಸುವುದು. ಪ್ರಸ್ತುತ ವರ್ಷದಲ್ಲಿ ಭೌತಿಕ 1252 ಗುರಿಯನ್ನು ಹಾಗೂ ಆರ್ಥಿಕ ರೂ.12.52 ಕೋಟಿಗಳ ಗುರಿ ನಿಗಧಿಪಡಿಸಲಾಗಿದೆ. (ಸಹಾಯಧನ ರೂ.5೦೦೦೦/- ಮತ್ತು ಸಾಲ ರೂ.5೦೦೦೦/-ಗಳು) ಫಲಾನುಭವಿಗಳಿಗೆ 2 ಕಂತುಗಳಲ್ಲಿ ಪಾವತಿಸಲಾಗುವುದು. ಸಾಲವನ್ನು ನಿಗಮದ ಮೂಲಕ ಶೇ4 ರಷ್ಟು ಬಡ್ಡಿ ದರದಲ್ಲಿ ವಿಧಿಸಲಾಗುತ್ತದೆ.

 

 

ಆ) ಮಹಿಳಾ ಉದ್ಯಮಶೀಲತಾ ಅಭಿವೃದ್ಧಿ ಯೋಜನೆ(2.0 ಲಕ್ಷಗಳ ಸಹಾಯಧನ):-

       

    

   ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಮಹಿಳೆಯರು ಸಣ್ಣ ವ್ಯಾಪಾರ ಸಣ್ಣ ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಪ್ರಾರಂಭಿಸಲು ನಿಗಮದಿಂದ ಸಹಾಯಧನ ಹಾಗೂ ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತದೆ. ಘಟಕ ವೆಚ್ಚದಲ್ಲಿ ಶೇ.70 ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷಗಳು ಸಹಾಯಧನವಾಗಿದ್ದು, ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.  

 

ಇ)  ಸ್ವಾವಲಂಬಿ ಸಾರಥಿ ಯೋಜನೆ(4.0 ಲಕ್ಷಗಳ ಸಹಾಯಧನ):-

ಈ ಯೋಜನೆಯಡಿ ಪರಿಶಿಷ್ಟ ಪಂಗಡದ ಯುವಕ/ಯುವತಿಯರಲ್ಲಿ ಸ್ವ-ಉದ್ಯೋಗವನ್ನು ಉತ್ತೇಜಿಸಲು ಸರಕು ಸಾಗಾಣಿಕೆ ವಾಹನ ಖರೀದಿ ಉದ್ದೇಶದ ಜೊತೆಗೆ ಸಾರಿಗೆ ವಾಹನ, ಟ್ರಾಕ್ಟ್‌ರ್ ಹಾಗೂ ಇತರೆ ವ್ಯಾಪಾರ ಉದ್ದೇಶಗಳಿಗೆ ಘಟಕ ವೆಚ್ಚದಲ್ಲಿ ಶೇ.70 ರಷ್ಟು ಅಥವಾ ಗರಿಷ್ಟ ರೂ.4.00 ಲಕ್ಷಗಳ ಸಹಾಯಧನವಾಗಿದ್ದು, ಉಳಿದ ಮೊತ್ತ ಬ್ಯಾಂಕ್ ಸಾಲವಾಗಿರುತ್ತದೆ.

 

 

 

 

                                                      

   

                                                                                                    

 

 

 

 

ಇತ್ತೀಚಿನ ನವೀಕರಣ​ : 12-10-2023 01:23 PM ಅನುಮೋದಕರು: Admin1ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080